ಚಿತ್ರ: ಶುಭಮಂಗಳ
ಸಾಹಿತ್ಯ: ಎಂ.ಎನ್.ವ್ಯಾಸರಾವ್
ಸಂಗೀತ: ವಿಜಯಭಾಸ್ಕರ್
ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ

ಹೇಮಾ.. ಹೇಮಾ... ಹೇಮಾ.. ಹೇಮಾ..

ನಾಕೊಂದ್ಲ ನಾಕು
ನಾಕೆರಡ್ಲ ಎಂಟು |೨|
ಇಷ್ಟೇ ಲೆಕ್ಕದ ನೆಂಟು
ಅಷ್ಟೇ ಲೆಕ್ಕದ ನಂಟು

ನಾಕೊಂದ್ಲ ನಾಕು

ನಾಕೆರಡ್ಲ ಎಂಟು 
ಇಷ್ಟೇ ಲೆಕ್ಕದ ನೆಂಟು
ಅಷ್ಟೇ ಲೆಕ್ಕದ ನಂಟು

ಮಳೆಗರೆದ.. ಹನಿ ಹನಿ ಗೆ.. ಭೂತಾಯಿ ಬರೆದಳೆ ಲೆಕ್ಕ?
ಚಿಗುರೊಡೆದ.. ಎಲೆ ಎಲೆಗೆ.. ವನದೇವಿ ಇಡುವಳೆ ಲೆಕ್ಕ ?|೨|

ಕೂಡದ ಕಳೆಯದ ಆ ಲೆಕ್ಕ
ಕೂಡೊ ಕಳೆಯೊ ಈ ಲೆಕ್ಕ 
ಯಾರಿಗೆ ಬೇಕು ಈ ಲೆಕ್ಕ? 
ಅ.. ಯಾರಿಗೆ ಬೇಕು ಈ ಲೆಕ್ಕ?

ಹೇಮಾ.. ಹೇಮಾ... ಹೇಮಾ.. ಹೇಮಾ ಅ ಆ..

ನಾಕೊಂದ್ಲ ನಾಕು
ನಾಕೆರಡ್ಲ ಎಂಟು 
ಇಷ್ಟೇ ಲೆಕ್ಕದ ನೆಂಟು
ಅಷ್ಟೇ ಲೆಕ್ಕದ ನಂಟು

ಕೋಗಿಲೆಯ.. ಇಂಚರಕೆ.. ವಸಂತ ಕೊಡುವನೆ ಲೆಕ್ಕ?
ಅರಳಿದ ಹೂ.. ಪರಿಮಳಕೆ.. ತಂಗಾಳಿ ಬರೆಯಿತೆ ಲೆಕ್ಕ? |೨|

ಎಣಿಸದ ಗುಣಿಸದ ಆ ಲೆಕ್ಕ
ಎಣಿಸೊ ಗುಣಿಸೊ ಈ ಲೆಕ್ಕ |೨|
ಯಾರಿಗೆ ಬೇಕು ಈ ಲೆಕ್ಕ?
ಹ ಯಾರಿಗೆ ಬೇಕು ಈ ಲೆಕ್ಕ?

ಹೇಮಾ.. ಹೇಮಾ... ಹೇಮಾ.. ಹೇಮಾ ಮಾ ಮಾ..

ನಾಕೊಂದ್ಲ ನಾಕು
ನಾಕೆರಡ್ಲ ಎಂಟು 
ಇಷ್ಟೇ ಲೆಕ್ಕದ ನೆಂಟು
ಅಷ್ಟೇ ಲೆಕ್ಕದ ನಂಟು

ಪ್ರೇಮಿಗಳ.. ಸಂಗಮಕೆ.. ಋತುವು ಹೇಳಿತೆ ಲೆಕ್ಕ?

ಪ್ರಿಯತಮನ.. ಚುಂಬನಕೆ.. ಪ್ರೇಯಸಿ ಇಡುವಳೆ ಲೆಕ್ಕ? |೨|

ಕಾಣದ ಕೇಳದ ಆ ಲೆಕ್ಕ
ಕಾಣುವ ಕೇಳುವ ಈ ಲೆಕ್ಕ |೨|
ಯಾರಿಗೆ ಬೇಕು ಈ ಲೆಕ್ಕ?
ಹ ಹ ಹ ಯಾರಿಗೆ ಬೇಕು ಈ ಲೆಕ್ಕ?

ಹೇಮಾ.. ಹೇಮಾ... ಹೇಮಾ.. ಆ.. ಹೇಮಾ

ನಾಕೊಂದ್ಲ ನಾಕು
ನಾಕೆರಡ್ಲ ಎಂಟು 
ಇಷ್ಟೇ ಲೆಕ್ಕದ ನೆಂಟು
ಅಷ್ಟೇ.. ಏ ಲೆಕ್ಕದ ನಂಟು

ನಾಕೊಂದ್ಲ ನಾಕು
ನಾಕೆರಡ್ಲ ಎಂಟು |೨|
ನಾಕು!

Category: ಕನ್ನಡ ಚಿತ್ರಸಾಹಿತ್ಯ
Category: ಶುಭಮಂಗಳ ಚಿತ್ರ
Category: ಎಂ.ಎನ್.ವ್ಯಾಸರಾವ್ ಸಾಹಿತ್ಯ
Category:Kannada